ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ 27ಕ್ಕೆ

YDL NEWS
1 Min Read

ಶಹಾಪುರ: ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಾಯಕ

ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರುಕ್ಕಿಣಿ ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್ ವಿರುದ್ದ ಟೌನ್ ಹಾಲ್‌ನಲ್ಲಿರುವ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಎದುರು ಡಿ.27 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೆದಾರ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಸಹಾಯಕ ಆಡಳಿತಾಧಿಕಾರಿ (ನಿವೃತ್ತ) ರುಕ್ಷ್ಮಿಣಿ ರವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತರು ಜಿಲ್ಲಾ ಆರೋಗ್ಯ ಅಧಿಕಾರಿಗಳ

ಮೂಲಕ ತಾಲೂಕ ಆಡಳಿತ ವೈದ್ಯಧಿಕಾರಿ ಡಾ.ಯಲ್ಲಪ್ಪ ಅವರಿಗೆ ರುಕ್ಷ್ಮಿಣಿ ಅವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಲು ಜುಲೈ 24 ರಂದು ಲಿಖಿತ ಆದೇಶ ಮಾಡಿದರೂ ಕೂಡ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಿಸದೇ ಕಾಲ ಹರಣ ಮಾಡಿ ಕರ್ತವ್ಯ ಲೋಪ ವೇಸಗಿದ್ದಾರೆ. ಕರ್ತವ್ಯಲೋಪ ಎಸಗುತ್ತಿರುವ ಡಾ.ಯಲ್ಲಪ್ಪ ಪಾಟೀಲ ಅವರನ್ನು ಅಮಾನತು ಮಾಡುವಂತೆ ಹಾಗೂ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಸಹಾಯಕ ರುಕ್ಕಿಣಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅನುಮತಿ ನೀಡಿ, ಸೂಕ್ತ ಬಂದೋಬಸ್ತ ಕಲ್ಪಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

Share This Article