ಸಮ- ಸಮಾಜ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳ ಪಾತ್ರ ಮೂಖ್ಯ

YDL NEWS
2 Min Read

ನಗರದ ಬಸವ ಬಯಲು ಮಂಟಪ ಆವರಣದಲ್ಲಿ ನಡೆದ ಶ್ರೀ ನಾದಬ್ರಹ್ಮ ಸಂಗೀತ ಸಾಂಸ್ಕೃತಿಕ ಸಂಸ್ಥೆ (ರಿ) ವತಿಯಿಂದ ಭಾವೈಕ್ಯ ಸಂಗಮ ಹಾಗೂ ಮಾತೃಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ದಿವ್ಯ ಸಂದೇಶವನ್ನು ಪೂಜ್ಯ ಶ್ರೀ ಸಿದ್ದಲಿಂಗ ದೇವರು ತಾಳಿಕೋಟಿ ರವರು ಇಂದಿನ ದಿನಮಾನಗಳಲ್ಲಿ ವ್ಯಕ್ತಿಗಳ ಸ್ವಾರ್ಥಕ್ಕಾಗಿ ಸಮಾಜ, ಧರ್ಮ, ಜಾತಿ, ಜಾತಿಗಳ ಮಧ್ಯ ಗೊಂದಲ, ಭಿನ್ನಮತ, ಮೂಡಿಸುವಂಥ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಸಮ ಸಮಾಜದ ನಿರ್ಮಾಣಕ್ಕಾಗಿ ಭಾವೈಕ್ಯ ಸಂಗಮ ವೇದಿಕೆ ಯಲ್ಲಿ ಹಿಂದೂ ,ಮುಸ್ಲಿಂ ,ಕ್ರೈಸ್ತ, ಬೌದ್ಧ, ಧರ್ಮದ ಗುರುಗಳನ್ನು ಒಂದೇ ವೇದಿಕೆ ಅಡಿಯಲ್ಲಿ ಸೇರಿಸಿ ಕಲ್ಯಾಣ ನಾಡಿನ ಭಾತೃತ್ವ , ಮಾತೃತ್ವ, ಭಾವನೆಗಳನ್ನು ಬಿತ್ತರಿಸುತ್ತಿರುವ ವೇದಿಕೆ ಇದಾಗಿದೆ ಎಂದರು. ಎಲ್ಲರೂ ಬದುಕು ಇರುವತನಕ ಧಾನ,ಧರ್ವ,ಪರೋಪಕಾರ, ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವಿಸುವುದು, ಮಾನವ ಧರ್ಮ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮ ಗುರುಗಳಾದ, ಸಗರ ಮುತ್ಯಾ ಹಜರತ್ ಸೈಯದ್ ಮೊಹಮ್ಮದ್ ಮುಜೀಬುದ್ದೀನ್ ಸಾಬ್ ಮಾತನಾಡಿ ಬೆರಳೆಣಿಕೆಯಷ್ಟು ಜನರು ಭಾರತದ ಸಾಮರಸ್ಯದ ಬದುಕನ್ನು ಹಾಳು ಮಾಡುತ್ತಿದ್ದಾರೆ ದೇವನೊಬ್ಬ ನಾಮ ಹಲವು ಎಂಬ ಸಂದೇಶವನ್ನು ವಿಶ್ವಗುರು ಬಸವಣ್ಣನವರು ಸಾರಿರುವುದು ನಮಗೆಲ್ಲ ತಿಳಿದಿರುವ ವಿಷಯ ಗಾಂಧೀಜಿಯ ಕನಸು ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿಗೂ ಒಂದೇ ಭಾರತ ಮಂದಿರ ಎನ್ನುವ ಹಾಗೆ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂದು ತಿಳಿಸಿದರು. ಕ್ರೈಸ್ತ ಧರ್ಮದ ಗುರುಗಳು ಫಾದರ್ ಸ್ಟೀವನ್ ಪ್ರಕಾಶ್ ವೇಗಿಸ್ ಅವರು ಮಾತನಾಡಿ ಶಹಾಪೂರ ಸಗರನಾಡಿನ ಸಂತರು, ಶರಣರ, ಮಹಾತ್ಮರ,ಬೀಡು ಫಕೀರೇಶ್ವರ ಮಠವು ಭಾವೈಕ್ಯ ಸಂಬಂಧವನ್ನು ಹೊಂದಿರುವ ಶ್ರೀಮಠ ವಾಗಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಸಾಹಿತ್ಯ ಉಳಿಸಿರುವ ಫಕೀರೇಶ್ವರ ಮಠದ ಪೂಜ್ಯ ಶ್ರೀ ಗುರುಪಾದ ಮಹಾಸ್ವಾಮಿಗಳು ಮಾತನಾಡಿ ಭಾವೈಕ್ಯ ಸಂಗಮ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸುವುದರ ಮುಖಾಂತರ ಸಮಾನತೆಯ ಮಂತ್ರವನ್ನು ಶ್ರೀ ನಾದಬ್ರಹ್ಮ ಸಂಗೀತ ಸಾಂಸ್ಕೃತಿಕ ಸಂಸ್ಥೆ ಕಾರ್ಯ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಮಾತೃಶ್ರೀ ಪ್ರಶಸ್ತಿ ಪ್ರಧಾನ ಮಾಡುವುದರ ಮುಖಾಂತರ ತಾಯಿಯೇ ದೇವರು ಎಂಬ ಹೆಗ್ಗಳಿಕೆಯನ್ನು ಗುರುತಿಸುವುದರ ಮುಖಾಂತರ ಹೆತ್ತ ತಾಯಿಗಿಂತ ,ಸಾಕು ತಾಯಿ, ಶ್ರೇಷ್ಠಳು ಎಂದು ಗುರುತಿಸಿ ಶ್ರೀಮತಿ ಸಿದ್ದಲಿಂಗಮ್ಮ ದಿ ಅಯ್ಯಣ್ಣ ಬಳಬಟ್ಟಿ ಶಹಾಪುರ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಾರ್ಯಕ್ರಮದ ಉದ್ಘಾಟಕರಾಗಿ ವಿಶ್ವನಾಥರಡ್ಡಿ ದರ್ಶನಾಪುರ, ಅಧ್ಯಕ್ಷತೆ ಭೀಮನಗೌಡ ಬಿ.ಬಿರದಾರ , ನೇತೃತ್ವ ಮಲ್ಲಯ್ಯ ಸ್ವಾಮಿ ಇಟಿಗಿ ಸಂಸ್ಥೆಯ ಅಧ್ಯಕ್ಷರು, ಸಂಗೀತ ಸೇವೆ ಚಂದ್ರಶೇಖರ ಗೋಗಿ, ವಾದ್ಯ ಸಹಕಾರ ಮಲ್ಲಯ್ಯ ಹಿರೇಮಠ, ಭರತನಾಟ್ಯ ನಿವೇದಿತಾ ಎಮ್. ನಾಯಕ, ನಿರೂಪಣೆ ವೀರೇಶ ಉಳ್ಳಿ ಶಹಾಪುರ ಮಾಡಿದರು ಸಂಗಮೇಶ ಅನವಾರ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಸರ್ವ,ಧರ್ಮಗಳ ,ಸರ್ವಜನರು ,ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Share This Article