*ಕೃತಕ ಬುದ್ದಿಮತ್ತೆ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಬೆಳಕು ಚೆಲ್ಲಿದ ಗೋಷ್ಠಿ*

YDL NEWS
2 Min Read

ಶಹಾಪುರ – ಮಂಡ್ಯದಲ್ಲಿ ಜರುಗುತ್ತಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ” ಸೃಜನಶೀಲತೆ – ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು ” ಎಂಬ ೩ ನೇ ಗೋಷ್ಠಿಯಲ್ಲಿ ಅಶಯ ನುಡಿಗಳನ್ನಾಡಿದ ಹಿರಿಯ ಮಾಧ್ಯಮ ತಜ್ಞರಾದ ಜಿ.ಎನ್. ಮೋಹನ್ ಅವರು ಆಧುನಿಕ ತಂತ್ರಜ್ಞಾನ ಪರಿಣಾಮದಿಂದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತುಂಬಾ ಪರಿವರ್ತನೆಗಳಾಗಿವೆ. ಜಗತ್ತು ಸಮೀಪದಿಂದ ನೋಡುತ್ತಿದ್ದೇವೆ. ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹಲವು ನಿರ್ದೇಶನಗಳ ಮೂಲಕ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮಧು ವೈ.ಎನ್ ಅವರು ಕೃತಕ ಬುದ್ದಿಮತ್ತೆ ಹಾಗೂ ಚಾಟ್ ಜಿ.ಪಿ.ಟಿ ಸೃಷ್ಟಿಸಿರುವ ಸವಾಲುಗಳು ಕುರಿತು ವಿಚಾರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು ಕುರಿತು ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಹೇಗೆ ಪ್ರಸರಣವಾಗುತ್ತಿದೆ, ಬಳಕೆಯಾಗುತ್ತದೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಕುರಿತು ಓಂ ಶಿವಪ್ರಕಾಶ್ ಅವರು ವಿಶ್ಲೇಷಿಸಿದರು. ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನ ಕುರಿತು ವಿಚಾರ ವ್ಯಕ್ತಪಡಿಸಿದರು. ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರನಾಥ ಹೊಸ್ಮನಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಡ್ಡಿಕೇರಿ ಗೋಪಾಲ ಸ್ವಾಗತಿಸಿದರು. ರುದ್ರೇಶ್ ಅವರು ನಿರೂಪಿಸಿದರು. ಬಿ.ಟಿ. ನಾಗೇಶ ವಂದಿಸಿದರು.———————————————ಶಹಾಪುರ – ಮಂಡ್ಯದಲ್ಲಿ ಜರುಗುತ್ತಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ” ಸೃಜನಶೀಲತೆ – ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು ” ಎಂಬ ೩ ನೇ ಗೋಷ್ಠಿಯಲ್ಲಿ ಅಶಯ ನುಡಿಗಳನ್ನಾಡಿದ ಹಿರಿಯ ಮಾಧ್ಯಮ ತಜ್ಞರಾದ ಜಿ.ಎನ್. ಮೋಹನ್ ಅವರು ಆಧುನಿಕ ತಂತ್ರಜ್ಞಾನ ಪರಿಣಾಮದಿಂದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತುಂಬಾ ಪರಿವರ್ತನೆಗಳಾಗಿವೆ. ಜಗತ್ತು ಸಮೀಪದಿಂದ ನೋಡುತ್ತಿದ್ದೇವೆ. ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹಲವು ನಿರ್ದೇಶನಗಳ ಮೂಲಕ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮಧು ವೈ.ಎನ್ ಅವರು ಕೃತಕ ಬುದ್ದಿಮತ್ತೆ ಹಾಗೂ ಚಾಟ್ ಜಿ.ಪಿ.ಟಿ ಸೃಷ್ಟಿಸಿರುವ ಸವಾಲುಗಳು ಕುರಿತು ವಿಚಾರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು ಕುರಿತು ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಹೇಗೆ ಪ್ರಸರಣವಾಗುತ್ತಿದೆ, ಬಳಕೆಯಾಗುತ್ತದೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಕುರಿತು ಓಂ ಶಿವಪ್ರಕಾಶ್ ಅವರು ವಿಶ್ಲೇಷಿಸಿದರು. ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನ ಕುರಿತು ವಿಚಾರ ವ್ಯಕ್ತಪಡಿಸಿದರು. ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರನಾಥ ಹೊಸ್ಮನಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಡ್ಡಿಕೇರಿ ಗೋಪಾಲ ಸ್ವಾಗತಿಸಿದರು. ರುದ್ರೇಶ್ ಅವರು ನಿರೂಪಿಸಿದರು. ಬಿ.ಟಿ. ನಾಗೇಶ ವಂದಿಸಿದರು.

Share This Article