ಹುವಿನ ಹಿಪ್ಪರಗಿ : ಬಸವನ ಬಾಗೇವಾಡಿ ತಾಲೂಕಿನ ಕಾಮನಕೇರಿ ಬೂದಿಹಾಳ ಸುತ್ತಮುತ್ತ ಗ್ರಾಮಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಭಯದ ವಾತಾವರಣದಲ್ಲೇ ಜೀವನ ಸಾಗಿಸುವಂತಾಗಿದೆ. ಇತ್ತೀಚಿಗೆ ತಾಲ್ಲೂಕಿನ ಗ್ರಾಮಗಳಲ್ಲಿ ಹಾಡುಹಗಲೇ ಕಳ್ಳತವಾಗುತ್ತಿದು. ಹೀಗಾಗಿ ಗ್ರಾಮಸ್ಥರು ರಾತ್ರಿಯಿಡಿ ಜಾಗರಣೆ ಮಾಡಿ ಗಸ್ತು ತಿರುಗುತ್ತಿದ್ದಾರೆ. ಗ್ರಾಮಕ್ಕೆ ಯಾರೇ ಬಂದರೂ ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿದೆ.
ರಾತ್ರಿಯೆಲ್ಲಾ ಬೀದಿ ಬೀದಿಯಲ್ಲಿ ಊರವರ ಗಸ್ತು, ಊರೊಳಗೆ ಯಾರೇ ಅಪರಿಚಿತರು ಬಂದರೂ ಅವರು ಸಂಶಯದ ವಸ್ತು. ಅತಂಕದಲ್ಲಿಯೇ ದಿನ ಕಳೆಯುವ ಜನ.
ಹುವಿನ ಹಿಪ್ಪರಗಿ ಸಮೀಪದ ಕಾಮನಕೇರಿ ಗ್ರಾಮದ ಹಾಗೂ ಹೊಲಗಳಲ್ಲಿ ವಸ್ಥಿ ನಿವಾಸಿಗಳ ಸ್ಥಿತಿ. ಕಳೆದ ನಾಲ್ಕೈದು ದಿನಗಳಿಂದ ಗ್ರಾಮಸ್ಥರಲ್ಲಿ ಕಳ್ಳರ ಕಾಟ ಕಾಡುತ್ತಿದ್ದು, ಭಯದ ವಾತಾವರಣದಲ್ಲೇ ಜೀವನ ಸಾಗಿಸುವಂತಾಗಿದೆ. ಇತ್ತೀಚಿಗೆ ಬೂದಿಹಾಳ ಗ್ರಾಮದ ಮನೆಗಳ್ಳತ ಯತ್ನದಿಂದ ಜನರು ಬೆಚ್ಚಿ ಬಿದ್ದಿದ್ದು, ಗ್ರಾಮಕ್ಕೆ ಯಾರೇ ಬಂದರೂ ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿದೆ. ಗ್ರಾಮಕ್ಕೆ ಕಳ್ಳರು ಬರುತ್ತಾರೆ ಎಂದು ರಾತ್ರಿಯಿಡಿ ಜಾಗರಣೆ ಮಾಡಿ ಗಸ್ತು ತಿರುಗುತ್ತಿದ್ದಾರೆ.
ರಾತ್ರಿಯೆಲ್ಲಾ ಗಸ್ತು:
ತಾಲ್ಲೂಕಿನಲ್ಲಿ ಕಳ್ಳತನ ವದಂತಿಯಿಂದ ಭಯಭೀತರಾದ ಗ್ರಾಮಸ್ಥರು ಸ್ವ ತಃ ತಾವೇ ರಾತ್ರಿಯಿಡಿ ಗಸ್ತು ತಿರುಗುತ್ತಿದ್ದಾರೆ. ಊರೊಳಗೆ ಯಾರೇ ಅಪರಿಚಿತರು, ವ್ಯಾಪಾರ ಮಾಡುವವರು ಬಂದರೂ ಅವರನ್ನು ಸಂಶಯದಿಂದ ನೋಡಲಾಗುತ್ತಿದೆ. ಕಳೆದೆರೆಡು ದಿನಗಳಿಂದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಗುಂಪು ಗುಂಪಾಗಿ ಗಸ್ತು ತಿರುಗಲು ಆರಂಭಿಸಿದ್ದು, ಗ್ರಾಮಕ್ಕೆ ಆಗಮಿಸುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಗುರುವಾರ ಗ್ರಾಮದ ದಾವಲ ಮಲ್ಲಿಕ್ ದೇವಸ್ಥಾನಕ್ಕೆ ನಾಲ್ಕು ಜನ ಅಪರಿಚಿತ ಯುವರ ಬಂದಿದ್ದನು ನೋಡಿ ದೂರದಿಂದಲ್ಲೆ ಪೋಟೋ ತೆಗೆದಿದ್ದಾರೆ.ಈ ವಿಷಯ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ರಾತ್ರಿ ಗಸ್ತು ತಿರುಗುವಾಗಿದ್ದಾರೆ.ಗ್ರಾಮದ ಜಮೀನನಲ್ಲಿ ವ್ಯಕ್ತಿಯೋರ್ವ ಕಂಡು ಒಲಕ್ಕೆ ವಸ್ಥಿ ಹೋಗಿದವರು ಭಯದಿಂದ ಮನೆಗೆ ಬಂದಿದ್ದಾರೆ.ಅಪರಿಚಿತ ಯಾರೆ ಕಂಡರು ಅನುಮಾನಿಸುವಂತಾಗಿದ್ದು ಈ ಗ್ರಾಮಕ್ಕೆ ಬರಲು ಸಂಬಂಧಿಕರು ಹೆದರುವಂತಾಗಿದೆ.

ಪೋಲಿಸ ಇಲಾಖೆ ಜನರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು ರಾತ್ರಿಯಲ್ಲಿ ಗಸ್ತು ಕಟ್ಟು ನಿಟ್ಟಾಗಿ ನಿಭಾಯಿಸುವಂತೆ ಬಾಗೇವಾಡಿ ಪೋಲಿಸ ಠಾಣೆಗೆ ನಿರ್ದೇಶನ ನೀಡಿ ಕಾಮನಕೇರಿ ಮತ್ತು ಬೂದಿಹಾಳ ಗ್ರಾಮದಲ್ಲಿ ಡಿವಾಯ್ಎಸ ಎಸಪಿ ನೇತೃತ್ವದಲ್ಲಿ ಸಭೆ ಕರೆದು ಜನರಿಗೆ ಧೈರ್ಯ ತುಂಬಬೇಕು.