ಇಂದು ದಿನಾಂಕ 19/02/2025 ರಂದು APD. ಸಂಸ್ಥೆ ಸುರಪುರದಲ್ಲಿ ವೀಲ್ ಚೇರ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಸುರಪುರ ಉಪ ತಹಸೀಲ್ದಾರ ಬಸವರಾಜ ಪಾಟೀಲ, ಪ್ರಭು ಜೈನಾಪುರ ಜಿಲ್ಲಾಧ್ಯಕ್ಷರು SCI ಯಾದಗಿರ ಹಾಗೂ ಅಧಿಕಾರಿಗಳಾದ ಶಿವಕುಮಾರ ಅವರು ಮತ್ತು APD ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ತಾಲ್ಲೂಕಿನ ಅನೇಕ ವಿಶೇಷ ಚೇತನರು ಭಾಗವಹಿಸಿದರು. APD ತಾಲ್ಲೂಕು ಸಂಯೋಜಕರಾದ ಗಿರೀಶ್ ಕುಲಕರ್ಣಿ ಸ್ವಾಗತಿಸಿದರು. ಉಪ ತಹಸೀಲ್ದಾರ ಅವರು ಮಾತನಾಡಿ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಜಿಲ್ಲಾಧ್ಯಕ್ಷರಾದ ಪ್ರಭು ಜೈನಾಪುರ ಅವರು APD ಸಂಸ್ಥೆಯ ಸಂಸ್ಥಾಪಕರಾದ ಹೇಮಾ ಮೇಡಂ ರವರ ಬಗ್ಗೆ ಮತ್ತು ಸಂಸ್ಥೆಯ ಕಾರ್ಯಕ್ರಮಗಳಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ 10 ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು.