ವರ್ಲ್ಡ್ ವಿಷನ್ ಇಂಡಿಯಾ ಕ್ಷೇತ್ರ ಅಭಿವೃದ್ಧಿ ಸಂಸ್ಥೆ ಯಾದಗಿರಿ ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಹಾಪುರದಲ್ಲಿ ಏರ್ಪಡಿಸಿದರು, ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತಹ ಸನ್ಮಾನ್ಯ ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ್, ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ” ಪ್ರತಿಯೊಬ್ಬರೂ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು, ವರ್ಲ್ಡ್ ವಿಷನ್ ಸಂಸ್ಥೆ ಸುಮಾರು ಐದು ವರ್ಷಗಳಿಂದ ಮಕ್ಕಳಿಗಾಗಿ ಮಹಿಳೆಯರಿಗಾಗಿ ಮತ್ತು ಗ್ರಾಮ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳು ಮಾಡುತ್ತಾ ಬಂದಿದೆ, ಅವರ ಕಾರ್ಯವು ಶ್ಲಾಘನೀಯ” ಎಂದು ನುಡಿದರು. ಯೋಜನಾಧಿಕಾರಿಗಳಾದ ಶ್ರೀ ಅನಿಲ್ ತೇಜಪ್ಪ ಬಲ್ಲೂರಕರ್ ಅವರು ಮಾತನಾಡಿ ಸಂಸ್ಥೆಯು ಮಕ್ಕಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವಂತಹ ಕಾರ್ಯಕ್ರಮಗಳನ್ನು ವಿವರಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಸರ್ಕಾರದೊಂದಿಗೆ ಸಹಕರಿಸುತ್ತೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ವರ್ಲ್ಡ್ ವಿಷನ್ ಸಂಸ್ಥೆ ವತಿಯಿಂದ ಹೊತಪೇಟೆ ಗ್ರಾಮದ ಸರಕಾರಿ ಶಾಲೆಯ 18 ವಿದ್ಯಾರ್ಥಿನೀಯರಿಗೆ ಶಾಲೆಗೆ ಹೋಗಲು ಸೈಕಲ್ ಗಳನ್ನು ವಿತರಣೆ ಮಾಡಿದರು.
ಮತ್ತು 30 ಅಪೌಷ್ಟಿಕ ಮಕ್ಕಳಿಗೆ ಆಹಾರ ಧಾನ್ಯಗಳನ್ನು, ಡಿಗ್ಗಿ, ಜೆ ತಾಂಡಾ, ಎಮ್ ತಾಂಡಾ, ರಸ್ಥಾಪುರ ಅಂಗನವಾಡಿ ಕೇಂದ್ರಗಳಿಗೆ ತಲಾ 30 ಕುರ್ಚಿಗಳು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಶ್ರೀ ಮಲ್ಲಣ್ಣ ದೇಸಾಯಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ನಿಷತ್ ಅಂಜುಮ್ ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸುಂದರ್, ಶ್ರೀ ರಾಬರ್ಟ್, ಮೋಹನ್, ಅಶೋಕ್, ಶಿವು, ಸಿದ್ದಮ್ಮ ಹಾಗೂ ವರ್ಲ್ಡ್ ವಿಷನ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶ್ರೀಮತಿ ಶುಭಾಂಗಿನಿ ಮಾರ್ಥಾ ನಿರೂಪಿಸಿದರು.