ಅಫಜಲಪುರ ಏ.18 : ಈ ಭಾರಿ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಹಿಂಚಗೇರಾ ಗ್ರಾಮದ ಪುಂಡಲೀಕ ಮಲ್ಲಪ್ಪ ಉಕ್ಕಲಿ ಎಂಬ ಬಾಲಕ 600ಕ್ಕೆ 575 ಅಂಕಗಳು ಪಡೆದು ಶೇಕಡ 95.83 ರಷ್ಟು ಫಲಿತಾಂಶ ಮಾಡಿ ವ್ಯಾಸಂಗ ಮಾಡಿದ ಅಫಜಲಪುರ ಪಟ್ಟಣದ ಶ್ರೀ ಬಿ.ಪಿ.ಸೇಡಂ ಪಿಯು. ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ತನ್ನ ತಂದೆ ತಾಯಿ ಹಾಗೂ ಊರಿನ ಕೀರ್ತಿ ಹೆಚ್ಚಿಸಿ ಗಮನ ಸೆಳೆದಿದ್ದಾನೆ.
ತಾಯಿ ಆಸರೆಯಲ್ಲೆ ಬೆಳೆದ ಬಾಲಕ
ತಂದೆಯನ್ನು ಕಳೆದುಕೊಂಡ ಬಾಲಕ ಪುಂಡಲೀಕ ತನ್ನ ತಾಯಿ ಆಸರೆಯಲ್ಲೆ ಬೆಳೆದನು. ಈ ಬಾಲಕನಿಗೆ ಬಡ ತಾಯಿ ಮಹಾದೇವಿ ಉಕ್ಕಲಿ ತನ್ನ ಮಗನ ಶಿಕ್ಷಣಕ್ಕಾಗಿ ಕೂಲಿ ನಾಲಿ ಮಾಡಿ ಕಷ್ಟ ಪಟ್ಟು ಮಗನಿಗೆ ಆತ್ಮಸ್ಥೈರ್ಯ ತುಂಬಿ ವಿದ್ಯಾಭ್ಯಾಸ ಮಾಡಿಸಿದ್ದಾಳೆ ಈಗ ಮಗನ ಫಲಿತಾಂಶ ನೋಡಿ ಬೆಟ್ಟದಷ್ಟು ಖುಷಿ ಪಟ್ಟಿದ್ದಾಳೆ .
ಬಾಲಕನ ಫಲಿತಾಂಶ ಹಿನ್ನಲೆ: ಆಡಳಿತ ಮಂಡಳಿ, ಉಪನ್ಯಾಸಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಬಾಲಕನ ಮುಂದಿನ ವ್ಯಾಸಂಗಕ್ಕೆ ಶುಭ ಹಾರೈಸಿದ್ದಾರೆ.
.
.