ಅಫಜಲಪುರ ಏ 19:: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಪಟ್ಟಣದ ಬಣಜಿಗ ಸಮಾಜದ ಪ್ರಶಾಂತಕುಮಾರ ಮಲ್ಲಪ್ಪ ನಿಗಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ 2025 ರಿಂದ ಮುಂದಿನ ಐದು ವರ್ಷಗಳ ಅವದಿಗೆ ನೇಮಕ ಮಾಡಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಆಡಳಿತ ಮಂಡಳಿ ಆದೇಶ ಪತ್ರ ನೀಡಿದೆ.
ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಇದೆ ದಿನಾಂಕ 20-4-2025 ರಂದು ಜರುಗಲಿದ್ದು ದಿನಾಂಕ 14-4.-2025 ರಂದು ಅಫಜಲಪುರ ತಾಲೂಕ ಬಣಜಿಗ ಸಮಾಜದ ಯುವ ಮುಖಂಡರಾದ ಪ್ರಶಾಂತಕುಮಾರ ಮಲ್ಲಪ್ಪ ನಿಗಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣಿಗೆ ಬಣಜಿಗ ಕ್ಷೇಮಾಭಿವೃದ್ಧಿ ಮಂಡಳಿ ತಿಳಿಸಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಬಸಣ್ಣ ಗುಣಾರಿ, ಮುರಗೇಂದ್ರ ಮಸಳಿ ಸೇರಿದಂತೆ ಅನೇಕರಿದ್ದರು.