ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ನವಜೋಡಿಗಳು

YDL NEWS
2 Min Read

ಕೆಂಭಾವಿ: ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ಅಂಗವಾಗಿ ಬುದ್ಧ ಬಸವ ಹಾಗೂ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅಭಿಮಾನಿ ಬಳಗ ಸರಳ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಈ ಭಾಗದ ಜನರಿಗೆ ಮಾದರಿಯಾಗಿದ್ದಾರೆ ಎಂದು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ಮಹಾನಾಯಕ ಡಾ. ಅಂಬೇಡ್ಕರವರ ಪುತ್ತಳಿ ಆವರಣದಲ್ಲಿ ಬಾಬಾ ಸಾಹೇಬರ 134 ನೇ ಜನ್ಮದಿನದ ಪ್ರಯುಕ್ತ ಬುದ್ಧ ಬಸವ ಅಂಬೇಡ್ಕರ ಅಭಿಮಾನಿ ಬಳಗದವತಿಯಿಂದ ಸೋಮವಾರ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶೇಷವಾಗಿ ಈ ಭಾಗದ ಯುವಕರು ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಆರ್ಥಿಕ ದುರ್ಬಲರಿಗೆ ನೆರವಾಗುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕೆಲಸಗಳು ನಿರಂತರವಾಗಿ ಮುಂದುವರಿಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಂಗಲ್ಯ ಭಾಗ್ಯ ಯೋಜನೆ ಅಡಿಯಲ್ಲಿ 50 ಸಾವಿರ ರೂಪಾಯಿ ಧನ ಸಹಾಯ ನೀಡಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಎಂದು ಕರೆ ನೀಡಿ, ಬಾಬಾಸಾಹೇಬರ ಆಶಯದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಸಮಾನತೆ ತರಲು ಶಿಕ್ಷಣ ಬಹಳ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಟು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಸಾರಿಪುತ್ರ ಮೆಂತೆಪಾಲ ಬಂತೆಜಿ ಸಾನಿಧ್ಯ ವಹಿಸಿ ಮಂಗಲ ಮಂತ್ರ ಪಠಣ ಮಾಡಿದರು.

ಶರಣಪ್ಪ ಜಿ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ.ಪಾಟೀಲ್, ಶಹಾಪೂರ ಬ್ಲಾಕ್ ಅಧ್ಯಕ್ಷ ಶಿವಮಹಾಂತ ಚಂದಾಪೂರ, ಶಂಕ್ರಣ್ಣ ವಣಿಕ್ಯಾಳ, ಶರಣಬಸ್ಸು ಡಿಗ್ಗಾವಿ, ವಾಮನರಾವ್ ದೇಶಪಾಂಡೆ, ಕೆಂಭಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸನಗೌಡ ಹೊಸಮನಿ, ಕೃಷ್ಣಯ್ಯ ಗುತ್ತೇದಾರ, ಬಸವರಾಜ್ ಚಿಂಚೋಳಿ, ಅಶೋಕ ಸೊನ್ನದ್, ಪುರಸಭೆ ಅಧ್ಯಕ್ಷ ರಹೇಮಾನ ಪಟೇಲ್ ಯಲಗೋಡ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ್, ಮುಖ್ಯಾಧಿಕಾರಿ ಮಹ್ಮದ್ ಯೂಸೂಫ್, ಮಲ್ಲಿಕಾರ್ಜುನ್ ಕ್ರಾಂತಿ, ರವಿ ಸೊನ್ನದ, ಮಹಿಪಾಲರಡ್ಡ ಡಿಗ್ಗಾವಿ, ಮಹಿಬೂಬ್ ನಾಶಿ, ಸೋಮನಗೌಡ ಚಿಂಚೋಳಿ, ಸಾಹೇಬಗೌಡ ನಂದರಗಿ, ಲಾಲಪ್ಪ ಹೊಸಮನಿ, ಮಕ್ತುಮ್ ಪಟೇಲ್ ಕಾಚೂರ, ಬಸವರಾಜ್ ಮಲ್ಲೆ, ಶಿವಶರಣ ನಾಗರಡ್ಡಿ, ವಿರುಪಾಕ್ಷಿ ಕರಡಕಲ್ ಸೇರಿದಂತೆ ಅಭಿಮಾನಿ ಬಳಗದ ಹಲವರು ಇದ್ದರು. ಕಾರ್ಯಕ್ರಮವನ್ನು ಪರಶುರಾಮ ಮಾಳಳ್ಳಿಕರ ಹಾಗೂ ಶರಣು ಬಡಿಗೇರ್ ನಡೆಸಿಕೊಟ್ಟರು.

Share This Article