ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಅವರಿಗೆ 2024-25ನೇ ಸಾಲಿನ ಡಿಜಿ & ಐಜಿಪಿ ಕಮೆಂಡೇಶನ್ ಡಿಸ್ಕ್ ಪದಕ ಲಭಿಸಿದೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನ ಪ್ರದರ್ಶಿಸಿರುವ ಅವರನ್ನು ಈ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಸಾರ್ವಜನಿಕರು ವಿವಿಧ ಸಂಘಟನೆಗಳ ಮುಖಂಡರು, ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳು ರಾಯಚೂರು ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ವಿಶೇಷ ಸಾಧನೆ ಮಾಡಿದ ಅಧಿಕಾರಿಗಳಿಗೆ ಈ ಪದಕ ನೀಡಲಾಗುತ್ತಿದೆ. ಎಸ್‌ಪಿಯಾಗಿ ಪುಟ್ಟಮಾದಯ್ಯ ಅವರು ರಾಯಚೂರು ಜಿಲ್ಲೆಯಲ್ಲಿ ನಡೆಸಿದ ಸುವ್ಯವಸ್ಥಿತ ಹಾಗೂ ಸಾರ್ವಜನಿಕರ ಜೊತೆ ನಡೆದುಕೊಳ್ಳುವ ರೀತಿ ಕಾನೂನು ಕ್ರಮಗಳನ್ನು ಪರಿಶೀಲನ ಮಾಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಾಲಿನಿಂದಲೇ ಆರಂಭಗೊಂಡಿರುವ ಈ ವಿಶೇಷ ಪದಕಕ್ಕೆ ಜಿಲ್ಲೆಯಿಂದ ಒಟ್ಟು ಮೂವರು ಪೊಲೀಸ್ ಸಿಬ್ಬಂದಿಗೆ ಆಯ್ಕೆ ಆಗಿರುವುದು ಗಮನಾರ್ಹ. ಎಸ್‌ಪಿ ಪುಟ್ಟಮಾದಯ್ಯ ಅವರು ಬಳಗನೂರ ಪೊಲೀಸ್ ಠಾಣೆಯ ಪಿಎಸ್‌ಐ ಎರಿಯಪ್ಪ ಹಾಗೂ ಹೆಡ್ ಕಾನ್ಸಟೇಬಲ್ ರಾಮಣ್ಣ ಕರ್ಜರ್ಗಿ ಅವರಿಗೆ ಈ ಪದಕ ಲಭಿಸಿದೆ.
ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂತಹ ಪ್ರಾಮಾಣಿಕ ಮತ್ತು ಶ್ರದ್ಧಾ ಸೇವೆಯ ಮೂಲಕ ಹೆಸರುವಾಸಿಯಾಗಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಇಲಾಖೆಯ ಕೀರ್ತಿಪತಾಕಿಯನ್ನು ಹಾರಿಸಿದ್ದಾರೆ.