ಕಲಬುರ್ಗಿ ಜಿಲ್ಲೆ ರಕ್ಷಿಸಲು ಕೃಪಾಂಕಿತ ಸಚಿವ ಖರ್ಗೆ ವಜಾಕ್ಕೆ ಆಗ್ರಹ ಹಿರಿಯ ಶಾಸಕರಾದ ಎಂ.ವೈ. ಪಾಟೀಲ್, ಬಿ.ಆರ್. ಪಾಟೀಲ್ ಸಂಪುಟಕ್ಕೆ ಸೇರ್ಪಡೆಗೆ ಮ್ಯಾಕೇರಿ ಒತ್ತಾಯಕಲಬುರಗಿ ಯಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಕೂಡಲೇ ಕೃಪಾಂಕಿತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಿ, ಹಿರಿಯ ಶಾಸಕರಾದ ಎಂ.ವೈ. ಪಾಟೀಲ್ ಇಲ್ಲವೇ ಬಿ.ಆರ್. ಪಾಟೀಲ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಆಡಳಿತ ವ್ಯವಸ್ಥೆ ಸುಧಾರಿಸಬೇಕು ಎಂದು ಒತ್ತಾಯಿಸಿ ಶೀಘ್ರ ರಾಜ್ಯಪಾಲರಿಗೆ ನಿಯೋಗದಲ್ಲಿ ತೆರಳಿ ಭೇಟಿ ಮಾಡುವುದಾಗಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳ ‘ವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು,ಎಐಸಿಸಿ ಅಧ್ಯಕ್ಷಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಕೃಪಾಂಕ ದಿಂದ ಮೂರು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿಯಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಹಗಲು ದರೋಡೆಯಾಗುತ್ತಿದೆ. ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಯಾರ ಭಯವಿಲ್ಲದೇ ಬರ್ಬರ ಹತ್ಯೆಗಳಾಗುತ್ತಿವೆ. ಜೂಜು ಕ್ಲಬ್, ಮಟಕಾ, ರೌಡಿಸಂ ಮತ್ತು ಗೂಂಡಾಗಿರಿಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಅಕ್ರಮ ಮರಳು ಮಾಫಿಯಾದಿಂದ ಕೋಟ್ಯಾಂತರ ರೂ.ಗಳು ಸರ್ಕಾರಕ್ಕೆ ವಂಚನೆಯಾಗಿದೆ.
ಸಮಾಜಘಾತುಕ ಶಕ್ತಿಗಳ ಮಾದಕ ವಸ್ತುಗಳ ಮಾಫಿಯಾಗಳಿಂದ ಸಮಾಜದ ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಮಕ್ಕಳು ಮತ್ತು ಯುವಕರ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿವೆ. ಇಂತಹ ಅಪರಾಧಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರು ಸಚಿವ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಪರಮಾಪ್ತ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಟ ಜಾಲವನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ಅವರು. ಅದೇ ರೀತಿ ಚಿತ್ತಾಪುರ ತಾಲ್ಲೂಕಿನ ಭಾಗೋಡಿ, ದಂಡೋತಿ, ಕಾಟಮದೇವರಹಳ್ಳಿ ಹಾಗೂ ಶಹಾಬಾದ್ ತಾಲ್ಲೂಕಿನ ಕುಂದನೂರ್ ಗ್ರಾಮಗಳಲ್ಲಿನ ಪಟ್ಟಾ ಜಮೀನುಗಳಲ್ಲಿ ಹಾಗೂ ಕಾಗಿಣಾ ನದಿಯಲ್ಲಿ ಕೆಆರ್ ಐಡಿಎಲ್‌ನವರು ಅಕ್ರಮ ಮತ್ತು ಅನಧಿಕೃತ ಮರಳು ಗಾರಿಕೆ ಮಾಡಿರುವುದರಿಂದ
ಸರ್ಕಾರಕ್ಕೆ ಎರಡೂವರೆ ಸಾವಿರ ಕೋಟಿ ರೂ.ಗಳಷ್ಟು ವಂಚನೆಯಾಗಿದೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಾಂಗತ್ರಿಕ ತಂಡವು ಜಂಟಿ ತನಿಖೆ ಕೈಗೊಂಡುಸರ್ಕಾರಕ್ಕೆ 105 ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಿದೆ. ವಂಚನೆ ದೃಢಪಟ್ಟಿದ್ದರಿಂದ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುರಿತು ಜಿಲ್ಲಾಧಿಕಾರಿಗಳು ಕಾರ್ಯಪಡೆಯ ಮುಖ್ಯಸ್ಥರು. ಅದಾಗ್ಯೂ, ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಹೋಗದೇ ತಮ್ಮ ಜವಾಬ್ದಾರಿಯಿಂದ ವಿಮುಖವಾಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಸಹ ಅವರು ಅಕ್ರಮ ಗಣಿಗಾರಿಕೆಯ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಇದೆಲ್ಲ ಪ್ರಿಯಾಂಕ್ ಖರ್ಗೆ ಅವರ ಕೈವಾಡವಾಗಿದೆ. ಹೀಗಾಗಿ ತಂದೆಯ ಕೃಪಾಕಟಾಕ್ಷದಿಂದ ಸಂಪುಟಕ್ಕೆ ಸೇರಿರುವ ಪ್ರಿಯಾಂಕ್ ಖರ್ಗೆಯವರನ್ನು ಕೂಡಲೇ ಕೈಬಿಡಬೇಕು ಹಾಗೂ ಮೂರಾಲ್ಕು ಬಾರಿ ಶಾಸಕರಾ ಗಿರುವ ಹಿರಿಯರಾದ ಎಂ.ವೈ.
ಪಾಟೀಲ್ ಅಲ್ಲದೇ ಬಿ.ಆರ್. ಪಾಟೀಲ್ ಅವರಂತ ಹವರನ್ನು ಸಂಪುಟಕ್ಕೆ ಸೇರಿಸಿಕೊಂಡು ಆಡಳಿತ ವ್ಯವಸ್ಥೆ ಸುಧಾರಿಸಬೇಕು ಎಂದು ಒತ್ತಾಯಿಸಿದರು.
ಅಪರಾಧ ಚಟುವಟಿಕೆಗಳ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾದಿ , ಕಾರಿಗಳು ಹಾಗೂ ನಗರ ಪೋಲಿಸ್ ಆಯುಕ್ತರೂ ಸಹ ವಿಫಲ ವಾಗಿದ್ದು, ಅವರಿಬ್ಬರನ್ನೂ ಅಮಾನತ್ತು ಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ರಾಜ್ಯಪಾಲರ ಬಳಿಗೆ ನಿಯೋಗ ಹೋಗಲಾಗುವುದು ಹಾಗೂ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿಯೂ ಸಹ ಮ್ಯಾಕೇರಿ ಅವರು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆಯ ರಾಜಕಾರಣ ಮಾಡು ತ್ತಿವೆ ಎಂಬ ಆಂದೋಲಾ ಶ್ರೀಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಮ್ಯಾಕೇರಿ ಅವರು. ಆಂದೋಲಾ ಶ್ರೀಗಳ ಕುರಿತು ನಮಗೆ ಅಪಾರ ಗೌರವವಿದೆ, ಪಕ್ಷದ ಮುಖಂಡರು ಪಕ್ಷದ ಕಾರ್ಯ ಚಟು ವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ನಾವಂತೂ ಪ್ರತಿ ಸಂಧರ್ಭದಲ್ಲಿಯೂ ಸಹ ಬಿಜೆಪಿಯ ವತಿಯಿಂದಲೇ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈರಣ್ಣ ಹಡಪದ, ಸಾಯಬಣ್ಣ ಜಾಲಗಾರ್, ಜಯಸಿಂಗ್ ಠಾಕೂರ್, ಚಂದ್ರಕಾಂತ ಕಿರಸಾವಳಗಿ, ಪ್ರೇಮ್ ಕೋಲಿ, ಗಿರೀಶ್ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.