ಯಾದಗಿರಿ ಜಿಲ್ಲೆಯ ಕೃಷಿ ವ್ಯವಸಾಯ ಪತ್ತಿನ ಸಹಕಾರಿ ಸಂಘಗಳಲ್ಲಿ ವ್ಯಾಪಕ ವಂಚನೆ: ಏವೂರಿನಲ್ಲಿ ದೂರು ದಾಖಲು

YDL NEWS
4 Min Read

ಯಾದಗಿರಿ ಜಿಲ್ಲೆಯಾದ್ಯಂತ ಕೃಷಿ ವ್ಯವಸಾಯ ಪತ್ತಿನ ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ವಂಚನೆಗಳು ಬೆಳಕಿಗೆ ಬಂದಿವೆ. ಶಹಾಪುರ ಮತ್ತು ಸುರಪುರ ತಾಲ್ಲೂಕುಗಳಲ್ಲಿ ಈ ಭ್ರಷ್ಟಾಚಾರ ಸಾಮಾನ್ಯ ಎಂಬಂತಾಗಿದೆ. ಈ ವಂಚನೆಗಳಿಗೆ ಜನರ ಅಜ್ಞಾನವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಕೆಲವೇ ಕೆಲವು ಮಂದಿ ಮಾತ್ರ ಈ ಸಹಕಾರಿ ಸಂಘಗಳ ನಯವಂಚನೆಯನ್ನು ಅರಿತಿದ್ದಾರೆ. ಡಿಸಿಸಿ ಬ್ಯಾಂಕ್‌ಗಳು ಮತ್ತು ಅವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳು ಆಯ್ದ ಕೆಲವು ಕುಟುಂಬಗಳ ಹಿಡಿತದಲ್ಲಿವೆ ಎಂಬ ಆರೋಪ ಕೇಳಿಬಂದಿದೆ. ಅಮಾಯಕ ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡು, ಸರ್ಕಾರ ನೀಡುವ ಸೌಲಭ್ಯಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ಇದ್ದರೂ, ಭ್ರಷ್ಟಾಚಾರವನ್ನು ತಡೆಯುವ ಬದಲು, ಭ್ರಷ್ಟರಿಗೆ ಮೇವು ಸಮೃದ್ಧವಾಗಿರಲಿ ಎಂಬ ಆಶಯದಿಂದ ಅರಿವು ಮೂಡಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

 

ಇದರ ಒಂದು ಭಾಗವಾಗಿ, ಸುರಪುರ ತಾಲ್ಲೂಕಿನ ಶಹಾಪುರ ಮತಕ್ಷೇತ್ರಕ್ಕೆ ಒಳಪಡುವ ಏವೂರು ಗ್ರಾಮ ಪಂಚಾಯತಿಯ ಕೃಷಿ ವ್ಯವಸಾಯ ಪತ್ತಿನ ಸಹಕಾರಿ ಸಂಘದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಇದರ ವಿರುದ್ದ ರೈತ ಸಂಘದ ಹೋರಾಟಗಾರ ಹಾಗೂ ಮಾಜಿ ಕಾರ್ಯದರ್ಶಿ ದೇವಿಂದ್ರಪ್ಪ ಲಕ್ಷ್ಮಣ್ ದೊರೆ ಅವರು ಯಾದಗಿರಿ ಜಿಲ್ಲಾ ಸಹಕಾರಿ ಸಂಘಗಳ ನಿಬಂಧಕರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಮುಖ ಆರೋಪಗಳು:

ಆರೋಪ 1: ವ್ಯಾಪಾರ ಅಭಿವೃದ್ಧಿ ಯೋಜನೆ (ಬಿಡಿಪಿ) ಹಣ ದುರುಪಯೋಗ

ಹಾಲಿ ಕಾರ್ಯದರ್ಶಿಯ ವಿರುದ್ಧ ದೇವಿಂದ್ರಪ್ಪ ಲಕ್ಷ್ಮಣ್‌ ದೊರೆ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂಘವು ವ್ಯಾಪಾರ ಅಭಿವೃದ್ಧಿ ಯೋಜನೆಯಡಿ (ಬಿಡಿಪಿ) ನಡೆಸಿದ ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ.

ದಿನಾಂಕ 01-04-2014 80 03-03-2015ರ ಅವದಿಯಲ್ಲಿ ಅಡಿಯಲ್ಲಿ ₹42,295 ಬಡ್ಡಿ ಹಾಗೂ ₹1,85,357 ಅಸಲು ವಸೂಲಾಗಿದೆ.

ದಿನಾಂಕ 01-04-2015 80 03-03-2016 ₹9,11,756 ಅಸಲು ಹಾಗೂ ₹75,400 ಬಡ್ಡಿ ವಸೂಲಾಗಿದೆ.

ಒಟ್ಟಾರೆ ₹12,14,808 ಸಂಗ್ರಹವಾಗಿದ್ದು, ಈ ಹಣವನ್ನು ಯಾವುದೇ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ ಅಥವಾ ಪಿಗ್ನಿ ಖಾತೆದಾರರಿಗೂ ಸಂದಾಯ ಮಾಡಿಲ್ಲ. ಖಾತೆದಾರರ ಸಾಮೂಹಿಕ ಸಹಿಗಳನ್ನು ಪಡೆದು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪ 2: ಮುದ್ದತ್ತು ಠೇವಣಿ ದುರ್ಬಳಕೆ

ದೇವಿಂದ್ರಪ್ಪ ಲಕ್ಷ್ಮಣ್ ದೊರೆ ಅವರು ಕಾರ್ಯದರ್ಶಿಯಾಗಿದ್ದ ಅವದಿಯಲ್ಲಿ (01-04-2013 00 31-03-2014) ໖.2.2. ಬ್ಯಾಂಕ್, ಸುರಪುರದಲ್ಲಿ ₹2,21,689 ಮುದ್ದತ್ತು ಠೇವಣಿ 2. ಇಡಲಾಗಿತ್ತು, ಆದರೆ 01-04-2014 80 31-03-20150 ಅವಧಿಯಲ್ಲಿ ಹಾಲಿ ಕಾರ್ಯದರ್ಶಿ ಈ ₹2,27,296 ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪ 3: ರೈತರ ಸಾಲ ಮತ್ತು ಸಾಲ ಮನ್ನಾ ಹಣದಲ್ಲಿ ವಂಚನೆ

 

2016ರಲ್ಲಿ 300 ಹೊಸ ಸದಸ್ಯರಿಗೆ ₹59,54,000 ಹೊಸ ಸಾಲ ಮಂಜೂರಾಗಿದ್ದರೂ, ಇದನ್ನು ರೈತರಿಗೆ ವಿತರಿಸದೆ “ಅಮಾನತ್ತು ಖಾತೆ”ಯಲ್ಲಿ ಇರಿಸಿದ್ದಾರೆ.

 

2017ರಲ್ಲಿ ಕರ್ನಾಟಕ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿದಾಗ, ಮನ್ನಾ ಮಾಡಿದ ಹಣ ಸರ್ಕಾರದಿಂದ ಬಂದ ನಂತರವಷ್ಟೇ ರೈತರಿಗೆ ಸಾಲ ವಿತರಣೆ ಮಾಡಿದ್ದಾರೆ. ಇದು ರೈತರಿಗೆ ಮತ್ತು ಸಂಘದ ಸದಸ್ಯರಿಗೆ ಮಾಡಿದ ಮಹಾದ್ರೋಹ ಎಂದು ದೂರಿನಲ್ಲಿ ತಿಳಿಸಲಾಗಿದೆ. 2016ರಲ್ಲಿ ಮಂಜೂರಾದ ಹಣವನ್ನು ತಾನೇ ಕಬಳಿಸಿ, ನಂತರ ಸಾಲ ಮನ್ನಾ ಹಣ ಬಂದ ಮೇಲೆ ರೈತರಿಗೆ ವಿತರಿಸಿದ್ದು ದೊಡ್ಡ ಅಪರಾಧ ಎಂದು ದೂರುದಾರರು ಹೇಳಿದ್ದಾರೆ.

 

ದಿನಾಂಕ 01-04-2016 80 31-03-2017ರ ಆಡಿಟ್ವರದಿಯ ಪ್ರಕಾರ, ಸಂಘದ ಸದಸ್ಯರ ಸಾಲ ₹65,30,600 ಆಗಿದ್ದು, ಸಂಘವು ಬ್ಯಾಂಕ್‌ಗೆ ₹1,26,73,605 ಪಾವತಿಸಬೇಕಿದೆ. ಇದರ ನಡುವೆ ₹61,43,005 ವ್ಯತ್ಯಾಸವಿದೆ. ಸಂಘದ ಸದಸ್ಯರಿಗೆ 2 ಬಾರಿ ಹಣ ಮುಟ್ಟಬೇಕಾಗಿದ್ದರೂ, 300 ಜನರಿಗೆ ಕೇವಲ ಒಂದು ಬಾರಿ ಸಾಲ ಮನ್ನಾ ಹಣ ಮಾತ್ರ ತಲುಪಿದೆ ಎಂದು ದೂರಲಾಗಿದೆ.

ಆರೋಪ 4: ತೊಗರಿ ಖರೀದಿ-ಮಾರಾಟ ವ್ಯವಹಾರದಲ್ಲಿ ಅಕ್ರಮ

 

2017-18 80 2023-24ರ  ವರಗೆ ಸಂಘವು ಸರ್ಕಾರದ ಆದೇಶದಂತೆ ತೊಗರಿ ಖರೀದಿ ಮತ್ತು ಮಾರಾಟ ವ್ಯವಹಾರವನ್ನು ನಡೆಸಿದೆ.

 

ರೈತರಿಂದ ಪ್ರತಿ ಚೀಲಕ್ಕೆ ₹25 ಹಾಗೂ ನೋಂದಣಿ ಶುಲ್ಕ ₹500 ವಸೂಲಿ ಮಾಡಿದ್ದು, ಯಾವುದೇ ರಸೀದಿ ನೀಡಿಲ್ಲ.

 

ತೊಗರಿ ಮಾರಾಟದಿಂದ ಬಂದ ಲಾಭ-ನಷ್ಟಗಳನ್ನು ಆಡಿಟ್ ವರದಿಯಲ್ಲಿ ನಮೂದಿಸಿಲ್ಲ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಸದಸ್మాಯರಿಗೆ ಮಾಹಿತಿ  ನೀಡಿಲ್ಲಾ

 

ಪ್ರತಿ ವರ್ಷ 20 ಸಾವಿರ ಕ್ವಿಂಟಾಲ್ ತೊಗರಿ ಖರೀದಿ-ಮಾರಾಟ ಮಾಡಿದ್ದು, ನಾಲ್ಕು ವರ್ಷಗಳಲ್ಲಿ 80 ಸಾವಿರ ಕ್ವಿಂಟಾಲ್ ವ್ಯವಹಾರ ನಡೆಸಿದ್ದಾರೆ. ಆದರೆ, ಈ ವ್ಯವಹಾರದ ಬಗ್ಗೆ 2017-18 ರಿಂದ 2023-24ರ ಆಡಿಟ್ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಆರೋಪಿಸಲಾಗಿದೆ.

ಮುಂದೇನು?

 

ದೇವಿಂದ್ರಪ್ಪ ಲಕ್ಷ್ಮಣ್ ದೊರೆ ಅವರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಸಹಕಾರ ಸಂಘ ಕಾಯ್ದೆ ಕಲಂ 64ರ ಪ್ರಕಾರ ಕ್ರಮ ವಹಿಸಿ, ವಿಚಾರಣೆ ನಡೆಸಿ, ತಪ್ಪಿತಸ್ಥ ಕಾರ್ಯದರ್ಶಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆಗಳ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ವಿನಂತಿಸಿದ್ದಾರೆ.

 

ಯಾದಗಿರಿ ಉಪ ವಿಭಾಗದ ಮಾನ್ಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಈ ಕುರಿತು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ. ಹೋರಾಟಗಾರರ ಪ್ರಕಾರ, ಯಾದಗಿರಿ ಭ್ರಷ್ಟರ ಜಿಲ್ಲೆಯಾಗಿದ್ದು, ಇಲ್ಲಿನ ಎಲ್ಲಾ ಸಹಕಾರಿ ಸಂಘಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಈ ಸಂಘಗಳ ಮಾಲೀಕರು ರಾಜಕೀಯ ಹಿಡಿತದಲ್ಲಿರುವ ಕುಟುಂಬಗಳಾಗಿದ್ದು, ಅವರು ಎಂದಿಗೂ ಸಾರ್ವಜನಿಕರಿಗೆ ಮಾಹಿತಿ ನೀಡುವುದಿಲ್ಲ. ಸಹಕಾರಿ ಸಂಘಗಳು ಜನಪ್ರತಿನಿಧಿಗಳಿಗಾಗಿ ಸರ್ಕಾರ ವ್ಯವಸ್ಥೆ ಮಾಡಿಕೊಟ್ಟ ಹುಲ್ಲುಗಾವಲು ಎಂದು ಹೋರಾಟಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮುಂದೇನಾಗುತ್ತದೋ ಕಾದು ನೋಡಬೇಕು.

Share This Article