ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪೂರ ಗ್ರಾಮದ BCM ಬಾಲಕಿಯರ ಹಾಸ್ಟಲ್ ಗೆ ಗೌರವಾನ್ವಿತ ಶ್ರೀ ಮರಿಯಪ್ಪ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ ಇವರು ದಿಢೀರ್ ಬೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮೊನ್ನೆ ನಡೆದ ವಿದ್ಯಾರ್ಥಿನಿಯರ ಅಸ್ವಸ್ಥೆ ಕುರಿತು ವಿದ್ಯಾರ್ಥಿನಿಯರನ್ನ ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ಕಾನೂನಿನ ಅರಿವು ಕುರಿತು ಎಲ್ಲಾ ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಿದರು .
ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢ ಶಾಲೆ ದೇವಾಪೂರ ಶಾಲೆಯಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಹಾಗೂ ದೇವಾಪೂರ ಗ್ರಾಮದ ಕೆಲವು ಸರ್ಕಾರಿ ಕಛೇರಿಗಳಾಗಿರು ಅಂಗನವಾಡಿ , ಕೂಸಿನ ಮನೆ,ಹಾಗೂ ದೇವಾಪೂರ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿದರು
*ವರದಿ :- ಶಾಂತಗೌಡ ದೇವಪೂರ ಸುರಪುರ ತಾಲೂಕು ವರದಿಗಾರರು*