ಯಾದಗಿರಿ | ನೀಲಿ ಧ್ವಜ ತೆರವು ಖಂಡಿಸಿ ಜು.25 ರಂದು ಹೋರಾಟ

YDL NEWS
1 Min Read

ಸುರಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ

 

ಹಿಂಭಾಗದ ಮೈದಾನದಲ್ಲಿ ಹಾಕಲಾಗಿದ್ದ ನೀಲಿ ಧ್ವಜಗಳನ್ನು ತೆರವುಗೊಳಿಸಿರುವ ಘಟನೆ ಖಂಡಿಸಿ ಹೋರಾಟ ರೂಪಿಸಲು ದಲಿತ ಸಾಮೂಹಿಕ ಸಂಘಟನೆಗಳ ಮುಖಂಡರು ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದ ಬಳಿ ಪೂರ್ವಭಾವಿ ಸಭೆ ನಡೆಸಿದರು.

ಸಭೆಯ ಕುರಿತು ಮುಖಂಡರು ಮಾತನಾಡಿ, ಕೇಂದ್ರ ಬಸ್ ನಿಲ್ದಾಣ ಝಂಡದಕೇರಿ ರಸ್ತೆ ಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ವೃತ್ತದಲ್ಲಿ ಅಶೋಕ ದ್ವಜ ಕಂಬಗಳಿಗಿದ್ದ ಅಶೋಕ ಚಕ್ರ ನೀಲಿದ್ವಜಗಳನ್ನು ತೆರುವು ಮಾಡಿರುವ ಘಟನೆಗೆ ಸಂಭಂದಿಸಿದ ಸುರಪೊರ ಪೋಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣಕ್ಕೆ ಜು.9 ರಂದು ಸುಳ್ಳು ಕೌಂಟರ್ ಕೇಸ್ ದಾಖಲಾಗಿರುವದನ್ನು ರದ್ದುಗೋಳಿಸಬೇಕು ಮತ್ತು ಸುರಪುರ ಸರ್ವೇ ನಂ 7/1, 7/2 ಮತ್ತು 7/3 ಒಟ್ಟು 8 ಎಕರೆ 36 ಗುಂಟೆ ಸರ್ಕಾರಿ ಖಾರಿಜ್ ಖಾತಾ ಭೂಮಿಯಲ್ಲಿ ಎಚ್‌.ಕೆ.ಇ ಸೋಸಾಯಿಟಿ ಹೆಸರಲ್ಲಿ 6 ಎಕರೆ 10 ಗುಂಟೆ ಭೂಮಿಯನ್ನು ಮಂಜೂರಿ ಮಾಡಲಾಗಿದೆ. ಸರ್ವೆ ನಂ 7/1 ರಲ್ಲಿ 2 ಎಕರೆ 28 ಗುಂಟೆ ಉಳಿದ ಜಾಗವನ್ನು ಒತ್ತುವರಿಯಾಗಿರುವದನ್ನು ಸರ್ಕಾರದ ವತಿಯಿಂದ ಸರ್ವೇ ಮಾಡಿ ಸದರಿ ಜಾಗದಲ್ಲಿಯೇ ಡಾ. ಅಂಬೇಡ್ಕ‌ರ್ ಪುತ್ಥಳಿಯ ಸುತ್ತ ಮುತ್ತ ಇರುವ ಜಾಗವನ್ನು ಡಾ. ಅಂಬೇಡ್ಕ‌ರ್ ಹೆಸರಲ್ಲಿ ಉದ್ಯಾನವನ, ಸಾಂಸ್ಕೃತಿಕ ಭವನ, ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡಿ ದಲಿತ ಜನರ ಅಭಿವೃದ್ಧಿಗೊಸ್ಕರ ಜಿಲ್ಲಾಡಳಿತ ಮತ್ತು ಸುರಪುರ ತಾಲೂಕಾಡಳಿತ 2 ಎಕರೆ 28 ಗುಂಟೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ತಿಳಿಸಿದರು.

Share This Article