ಶಹಾಪುರ:-ಇಂದು ಶಹಾಪುರ ನಗರ ನಂದಿನಿ ಹೋಟೆಲನಲ್ಲಿ, ಕೆಂಭಾವಿ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರರಾದ ಮಡಿವಾಳಪ್ಪ. ಪಾಟೀಲ್ ಹೆಗ್ಗಣದೊಡ್ಡಿಯವರು ಯಾದಗಿರಿ ಜಿಲ್ಲೆಯ ವೀರಶೈವ ಸಮಾಜದ ಯುವ ಘಟಕದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು,ಕಾರ್ಯಕ್ರಮದಲ್ಲಿ ತಾಲೂಕು ಕ. ಸಾ.ಪ ಶಹಾಪುರದ ಅಧ್ಯಕ್ಷರಾದ ಡಾ.ರವೀಂದ್ರನಾಥ್ ಹೊಸಮನಿ,ಹಾಗೂ ಪರಿಷತ್ತಿನ ಹಿರಿಯ ಪದಾಧಿಕಾರಿಗಳಾದ ಡಾ. ನೀಲಕಂಠ ಬಡಿಗೇರ್, ಶಂಕರ್ ಸಿಂಘ ,ಮಲ್ಲಪ್ಪ ಬೀರನೂರ್, ಮಹದೇವ್ ದಿಗ್ಗಿ, ದೌಲಪ್ಪ ಸಜ್ಜನ,ಮಾನಪ್ಪ ಗಡ್ಡದ, ದೇವೇಂದ್ರಪ್ಪ ವಿಶ್ವಕರ್ಮ,, ಭೀ.ಗುಡಿ ವಲಯದ ಅಧ್ಯಕ್ಷರಾದ ಶರಣಬಸವ ಬಿರಾದಾರ್,ಗೌರವ ಕಾರ್ಯದರ್ಶಿಗಳಾದ ಸುರೇಶ ಕೆ.ಅರುಣಿ ರವರು ಉಪಸ್ಥಿತರಿದ್ದರು.