ವಿಧಾನ ಪರಿಷತ್ ಸ್ಥಾನ ನೀಡಲು ಒತ್ತಾಯ

YDL NEWS
1 Min Read

ಯಾದಗಿರಿ: ಹಿಂದುಳಿದ ವರ್ಗದ ನಾಯಕರು ಮತ್ತು ರೈತ ಪರ ಹೋರಾಟಗಾರರಾದ ಶರಣಪ್ಪ ಸಲ್ಲಾದಪುರ ಅವರಿಗೆ ವಿಧಾನ ಪರಿಷತ್ (ಒಐಆ) ಸ್ಥಾನವನ್ನು ನೀಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿದರು.

 

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಶಹಾಪುರ ತಾಲೂಕು ಅಧ್ಯಕ್ಷ ಭೀಮನಗೌಡ ಪೋಲಿಸ್ ಪಾಟೀಲ್ ಅವರು ರೈತ ಹೋರಾಟದ ಮೂಲಕ ರಾಜಕಾರಣಕ್ಕೆ ಬಂದು ಸುಮಾರು ವರ್ಷಗಳಿಂದ ಸಮಾಜ ಸೇವೆ ಜೊತೆಗೆ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ

 

ಸಲ್ಲಿಸುತ್ತಿದ್ದಾರೆ ಇವರಿಗೆ ಇನ್ನಷ್ಟು ಸೇವೆ ಸಲ್ಲಿಸಲು ಪಕ್ಷ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

 

ಈ ಭಾಗದ ರೈತ ಪರ 40 ವರ್ಷಗಳಿಂದ ಸಾಕಷ್ಟು ಹೋರಾಟಗಳು ಮಾಡಿ ರೈತರಿಗೆ ಧ್ವನಿಯಾಗಿ ರೈತರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ಇವರನ್ನು ವಿಧಾನ ಪರಿಷತ್ ನ ಸದಸ್ಯರನ್ನಾಗಿ ಮಾಡಿ ಅವರಿಗೆ ಅವಕಾಶ ನೀಡಿದರೆ ಇನ್ನೂ ಅವರು ರೈತರ ಪರ ಕೆಲಸ ಮಾಡಲು ಶಕ್ತಿ ನೀಡಿದಂತೆಯಾಗುತ್ತದೆ ಎಂದು ಅಂಗವಿಕಲರ ಸಂಘದ ರಾಜ್ಯಾಧ್ಯಕ್ಷ ಸುಭಾಷ್‌ ಹೊತಪೇಟಿ ಹೇಳಿದರು.

 

ಸರ್ವಜ್ಞ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಂಗಮೇಶ ಕುಂಬಾರ, ಶಿವಶರಣ ಕುಂಬಾರ ಇತರರಿದ್ದರು.

Share This Article