ಲಿಂಗಸುಗೂರು:
2023-24ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೈಕ್ರೋ-ಮೇಘಾ ಯೋಜನೆಯಡಿ ನಿರ್ಮಿಸಲಾದ ಲಿಂಗಸುಗೂರು ಸರಕಾರಿ ಪಾಲಿಟೆಕ್‌ನಿಕ್ ಕಾಲೇಜಿನಲ್ಲಿ 1 ಕೋಟಿ ರೂಪಾಯಿ ಅನುದಾನದಡಿಯಲ್ಲಿ ನಿರ್ಮಿತವಾದ ನೂತನ ಗ್ರಂಥಾಲಯ ಕಟ್ಟಡವನ್ನು ಸ್ಥಳೀಯ ಶಾಸಕರಾದ ಶ ಮಾನಪ್ಪ ವಜ್ಜಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ತಾಂತ್ರಿಕ ಶಿಕ್ಷಣವನ್ನು ಸಾಮಾನ್ಯ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರಕುವಂತೆ ಮಾಡಲು ಲಿಂಗಸುಗೂರಿನಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಪಾಲಿಟೆಕ್‌ನಿಕ್ ಕಾಲೇಜಿನಲ್ಲಿ ಸುವ್ಯವಸ್ಥಿತ ಗ್ರಂಥಾಲಯ ಶ್ರೇಷ್ಟ ವಿದ್ಯಾಭ್ಯಾಸದ ಸಂಕೇತವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪೂರ್ ಮಾತನಾಡಿ ಎಸ್ ಎಸ್ ಎಲ್ ಸಿ. ಮುಗಿದ ನಂತರ ತಾಂತ್ರಿಕ ಕೋರ್ಸ್ ಗಳನ್ನು ಮಾಡಿ ಜೀವನ ದಲ್ಲಿ ಆರ್ಥಿಕವಾಗಿ ಬೆಳೆಯಲು ಡಿಪ್ಲೋಮ ಕೋರ್ಸ್ ಗಳನ್ನು ಮಾಡಿ ಮೊದಲು ಡಿಪ್ಲೋಮ ಕೊರ್ಸ ಮಾಡಬೇಕಾದರೆ ರಾಯಚೂರು ಬಳ್ಳಾರಿ ಧಾರವಾಡ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇತ್ತು ಆದರೆ ಈಗ
ಡಿಪ್ಲೋಮ ಕಾಲೇಜು ನಮ್ಮ ತಾಲ್ಲೂಕಿನಲ್ಲಿ ಇದೆ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರ da ಅಧ್ಯಕ್ಷರಾದ ಭೂಪನಗೌಡ ಪಾಟೀಲ್ ಕರಡಕಲ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರಾದ ಪಾಮಯ್ಯ ಮುರಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೀರನ ಗೌಡ ಲೆಕ್ಕಿಹಾಳ ಶಶಿಧರ್ ಪಾಟೀಲ್ ಬಸಣ್ಣಮೇಟಿ ಗಿರಿಮಲ್ಲನ ಗೌಡ ಕರಡಕಲ ಕೆ ನಾಗ ಭೂಷಣ ಮುದಕಪ್ಪ ನಾಯಕ ವೆಂಕನಗೌಡ ಐದನಾಳ ಹನುಮಂತಪ್ಪ ಎ ಇ ಇ. ಕಾಲೇಜಿನ ಪ್ರಾಂಶುಪಾಲರು ಮಲ್ಲಪ್ಪ ಸರ್ಜಾಪುರ ಪಾಲಿಟೆಕ್‌ನಿಕ್ ಕಾಲೇಜಿನ್ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.