ಯಾದಗಿರಿ ನ್ಯೂಸ
ಇಂದು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೃಹ ರಕ್ಷಕ ದಳದ ಭವ್ಯ ಕವಾಯತು ಕಾರ್ಯಕ್ರಮ ನಡೆಯಿತು.
ಗೃಹ ರಕ್ಷಕ ದಳದ ತಂಡದ ನಾಯಕ ದೇವೇಂದ್ರಪ್ಪ ನಾಸಿ ಸರ್ ಹಾಗೂ ಯಾದಗಿರಿ ಜಿಲ್ಲೆಯ ಗೃಹರಕ್ಷಕರ ಬೋಧಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾವತಿ ಮೇಡಂ ಅವರ ಮಾರ್ಗದರ್ಶನದಲ್ಲಿ ಕವಾಯತು ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆ ಗೃಹ ರಕ್ಷಕರಾದ ಸಂಗಣ್ಣ ದಾವಲ್, ಮಲಿಕ್, ಮೈನುದ್ದಿನ್, ನಬಿ ರಸೂಲ್ ಹಾಗೂ ಅಬ್ದುಲ್ ರಹೀಮ್ ಸಾಹೇಬ್ ಭಾಗವಹಿಸಿದರು.